ಹಗಲು      ರಾತ್ರಿ

ಭಾನುವಾರ, ಮೇ 16, 2021

ಇದೂ ಒಂದು ಬಯಕೆ...

ಬಯಸಿದಷ್ಟು ಬೆಳೆಯುವ ಬಯಕೆ
ಮನತುಂಬಿ ಹರಿಯುತಿದೆ ಬಯಕೆ
ನೀಲಾಕಾಶದ ಕೆಳಗೆ ಘರ್ಜಿಸುವ ಬಯಕೆ
ಕಪ್ಪು ರಸ್ತೆಯ ಮೇಲೆ ಕುಣಿದಾಡುವ ಬಯಕೆ
ಇದು ಇಂದಿನ ಬಯಕೆಯಲ್ಲ;
ಬಂಧನದ ಬಯಕೆಯೂ ಅಲ್ಲ,
ಶತಮಾನಗಳು ಕಂಡ ಬಯಕೆ,
ಶತಕ ಬಾರಿಸದ ಬಯಕೆ,
ಸ್ವಾಭಿಮಾನದ ಬಯಕೆ
ಇದು ಭವಿಷ್ಯಕ್ಕಾಗೊಂದು ಕಿರು ಬಯಕೆ

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ