ಹಗಲು      ರಾತ್ರಿ

ಶನಿವಾರ, ಮೇ 16, 2020

🔐ಲೋಕ ಎಲ್ಲಾ ಲೋಕ್ ಆತ್ 🔗 ಅಂದ್-ಇಂದ್🗝

✍🏽 ಅಭಿಜಿತ್.ಕೆ.ಜೆ, ಎನ್ನೆಂಸಿ ಸುಳ್ಯ

ಲೋಕ್‌ಡೌನ್ ರಜೆಲಿ ವಾಟ್ಸಪ್ ಸ್ಟಾಟಸ್ ನೋಡಕನ, ಸುಮಾರ್ ಜನ ಕೊರೋಣದ ಬಗ್ಗೆ ಪದ್ಯ ಎಲ್ಲಾ ಬರ್‌ದಾಳ್‌ದ್ ಅಂತ ಗೊತ್ತಾತ್. ಕೂಡ್‌ಲೆ ನಾನೂ ಮೊಬೈಲ್‌ಲೇ ಒಂದು ಪದ್ಯ ಟೈಪಿಸಿದೆ‌. ಕೆಲವ್ ವೆಬ್‌ ಮಾಧ್ಯಮಗಳಿಗೆ ಕಳ್‌ಸಿದೆ. ಆದ್ರೆ ಒಂದ್ ವಾರ ಕಳ್‌ದರೆನೂ ಪ್ರಕಟಿಸಿತ್‌ಲೆ. ಕೂಡಲೇ ಈ ನನ್ನ ಹಳೇ ಬ್ಲಾಗ್ ನೆಂಪಾತ್. ಪ್ರಕಟಿಸಿದೆ. ಇದ್ ನನ್ನ ಎರಡನೇ ಅರೆಭಾಷೆ ಕವನ. ದಯವಿಟ್ಟು ಓದಿ... ಅರ್ಥ ಆದೂಂತ ತೋರ್‌ದೆ
👇👇👇👇👇👇👇👇👇

ಅಂದ್ ನಾವು ಕ್ಲಾಸ್‌ಲಿ ಕುದ್ದೊ ಗಂಟೆ ಗಂಟೆ...
ಬಸ್ಸಿಗೆ ಕಾದೊ ಅರ್ಧ ಗಂಟೆ...
ಅಂದ್ ಗುರು ಹೇಳ್ದೊ...
ತಾಳ್ಮೆಂತ ಹೇಳುವ ಗುಡ್ಡೆನ ಹತ್ತಕು ನೀವು...

ಇಂದ್...ಲೋಕದ ಅವಸ್ಥೆನೇ ಬೇರೆ‌..‌.
ಆದರೂ ನಮ್ಮ ಕತೆ ಅದೇ...
ಮೊಬೈಲ್ ಮುಂದೆ ಕುದ್ದೊ ಗಂಟೆ ಗಂಟೆ...
ಸಿಗ್ನಲ್‌ಗಾಗಿ ಹತ್ತಿದೊ ಕಾಡ್-ಗುಡ್ಡೆ...

ಅಂದ್ ಹೋದಲ್ಲೆಲ್ಲಾ ಬ್ಲೋಕ್...ಟ್ರಾಫಿಕ್ ಬ್ಲೋಕ್
ಇಂದ್ ಹೋದರೆ ಲೋಕ್...ರೋಡೆಲ್ಲಾ ಲೋಕ್
ಅಂದ್ ನಮ್ಮವುಕೆ ಬಸ್ಸ್‌ಲಿ ನಿದ್ದೆ...
ಇಂದ್ ನಮ್ಮ ಬಸ್ಸ್‌ಗಳಿಗೇ ನಿದ್ದೆ...

ಹೊರಗೆ ಹೋಕೆ ಹೆದರಿಕೆ...ಹೆದರಕು...!
ಆಗ ಬಾತ್ ಸಂಶಯ...
ಯಾರಿಗೆ ಹೆದರಕು...
ಅದ್... ಆ ಕೊರೋನಕ್ಕೆನಾ ಅದೋ ನಮ್ಮ‌ ಪೋಲಿಸ್‌ಗೆನಾ ?

ಕೊರೋನಾಂತ ಹೇಳುವ ಶತ್ರುಗೆ ಹೆದರಿ, ಆದ್ರೆ ಜಾಗ್ರತೆನೂ ಇರ್‌ಲಿ
ಪೋಲಿಸ್‌ನವರ ಕಾಂಬಕನ ಭಕ್ತಿಂದ ಹೆದರಿ

#ಸಲಾಂ_ಕೊರೋನಾ_ವಾರಿಯರ್ಸ್🙏🏽

✍🏽 ಅಭಿಜಿತ್.ಕೆ.ಜೆ, ಎನ್ನೆಂಸಿ ಸುಳ್ಯ

http://sullia.suddinews.com/archives/455359

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ