ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಮನದ ಪಟ

ಮನದ ಪಟದಿ ರಚಿತ ಚಿತ್ತಾರ
ಸುಣ್ಣ ಬಳಿದು ಮಸಿಯು ತೇದಂತೆ
ಸ್ಪಷ್ಟ, ಸುಂದರ, ಹಿತಕರ

ಡಿಜಿ ಪಠದೊಳು ಸೆರೆಸಿಕ್ಕ ಚಿತ್ತಾರ
ಪಿಕ್ಸೆಲ್ ಗಾತ್ರದಿ, ಪರದೆ ಮಿತಿಯಲಿ 
ಸೂಂ ಮಾಡುತ ಸನಿಹವಾದಂತೆ
ಅಸ್ಪಷ್ಟದಿ ದೂರವಾಗುತಿಹುದು ಮನದಿಂದ

ಸೆರೆಹಿಡಿದಿಲ್ಲ ನಾ ಚಿತ್ರವ
ಆ ಡಿಜಿಪರದೆಯಲಿ
ಕಟ್ಟಿ ಹಾಕಿರುವೆ ಕಣ್ಣ ಹಿಂದೆ,
ಇದೀಗ ನಕಲಾಗಿರುವುದು ಮನದ ಮುಂದೆ

ವೀಕ್ಷಕನು ನಾನಾಗಿರುವ ತನಕ
ಶಾಶ್ವತವೀ ಜಗದಿ; ನಾ ಕಂಡ ನೋಟ..!

21/05/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ