ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 10, 2025

ಮನದೊಳು ನೀ‌ನಿರೆ...

ಮಿಡಿಯುವ ಮನವೊಂದಿದ್ದರೆ
ನುಡಿಯದು ಉಸಿರೊಳು ಹರಿಯದೆ?

ಹಸಿವದು ಉದರದಿ ಇರದಿರೆ
ಉದಕವನರಸುವ ಕೆಲಸವೇ?

ಧರೆಯಿದು ಆಧರಿಸದಿರೆ
ನೆಲವಿದು ಎನಗೆ ನೆಲೆಯೇ?

ಬರುತಿಹೆ ನಾ ಭರದಿ!
ಬಾರದಿರೆ, ನೀನಿರುವೆ ಭವದಿ.

(10/10/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ