ಹಗಲು      ರಾತ್ರಿ

ಗುರುವಾರ, ಫೆಬ್ರವರಿ 10, 2022

ನಗು...! ಸಂವಾದ - ಕವನ

27/12/2021
ನಾನು :
ನಗುವೆಲ್ಲಿಹುದು ಗೆಳೆಯಾ,
ನಗುವೆಲ್ಲಿಹುದು ಗೆಳೆಯಾ,

ನಗು ನಗುತಾ ಹೇಳೆನಗೆ,
ನಗಲು ಬಾರದೆನಗೆ

ನೀ ಹೇಳು ತಿಳಿಯೆನಗೆ
ನಗುಮೊಗದಿ ನಲಿಯೆನುತ

ನಗುವ ಬೀರುತ ನಗಿಸುತಲಿರು,
ನೀ ಎನ್ನ ಮನಾಗ್ರಜ...

ಗೆಳೆಯ (ಅಭಿಷೇಕ್ ಎ) :
ತೆರೆ ಮನದ ಕಲ್ಮಶದ ಕದವ
ಕರೆ ಮಾಡಿ ಕೊಡುತಲಿರು ಮುದವ
ಕರ ಮುಂದೆ ಎದೆಗೊತ್ತಿ ನಮಿಸು 
ಕಿರಿ-ಕಿರಿಯ ಮೊದಲ್ತಿರಸ್-ಕರಿಸು

ಭರ-ವಸೆಯ ಮನತುಂಬ ಭರಿಸು
ಬರೆ-ಯುತ್ತಿರು ಮನಬಂದ ಕನಸು
ಇದು ಸಹಜ ನಗುತರಿಸಲ್ ಸರಿಯು
ಇದ ಸಾರು 'ನಗು'ಇಳೆಯ ಸಿರಿಯು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ