ಹಗಲು      ರಾತ್ರಿ

ಗುರುವಾರ, ಫೆಬ್ರವರಿ 10, 2022

ಕಾಲದ ಗೆಳತಿ...!💆

ಕಾಲದ ಕಡಲಲ್ಲಿ ಅಲೆಯಾಗಿ ಬಂದ ಗೆಳತಿ,
ಅಲೆ-ಅಲೆಯಾಗಿ ಸೇರಿಹೆ ನೀ ನನ್ನ ಒಡಲು

ಹಯವು ತೇರ ಎಳೆಯುವಂತೆ,
ಮಳೆಯು ನೆಲವ ಮುತ್ತುವಂತೆ,
ನೀ ಎನ್ನ ಸೆಳೆಯುತಿರುವೆ... ಓ ಗೆಳತೀ...

ನಿನ್ನ ಕರೆಯು ಕೇಳದಂತೆ,
ನಿನ್ನ ನೋಟ ಕಾಣದಂತೆ,
ಕಿವುಡಾಗುವ, ಕುರುಡಾಗುವ ಮಹಾಬಯಕೆ...!

ನಾ ನಗುಮೊಗವ ತೋರಲಾರೆ,
ಬಂದಿಹುದೆನಗೆ ಆ ಕಟ್ಟಳೆ
ಅದೇ ನೋಡಿ ಎನ್ನ ಮುಖದಿ
ಮಾಸ್ಕಾಗಿಹುದು ಮಹನೀಯರೇ...

ಇಲ್ಲಿ ನಾ ನಾನಲ್ಲ, ಗೆಳತಿಯು ನನಗಲ್ಲ,
ಬಯಸದಿರಲಿ ಆಕೆ... ನಿಮ್ಮ ಗೆಳೆತನವ.....
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ