ಹಗಲು      ರಾತ್ರಿ

ಗುರುವಾರ, ಅಕ್ಟೋಬರ್ 21, 2021

ಮುಖಯಾನ...

ಮುಖ ಮುಖಗಳಲಿ ನೋಡು...
ಅನಂತತೆಯ ಭಾವಯಾನ...
ಮಿಂಚಿ ಮರೆಯುತಿಹುದು,
ಹಂಚಿ ಬೆರೆಯುತಿಹುದು,
ನಮ್ಮ-ನಿಮ್ಮ ಮುಖಭಾವ

ಅವನಲ್ಲಿ ಇವನಲ್ಲಿ
ಅವಳಲ್ಲಿ ಇವಳಲ್ಲಿ
ಮುಖವ ನೋಡಿ
ಅಲ್ಲೂ ನಿನ್ನ ಮುಖವಿರದಿಹುದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ