ಹಗಲು      ರಾತ್ರಿ

ಗುರುವಾರ, ನವೆಂಬರ್ 12, 2020

ಏನೋ ಒಂದ್‌ ಕತೆ...

ಓಡಿ ಬಾತ್‌ ನಮ್ಮ ಹೈದ…
ಹೋಗಿ ಸೇರ್ತ್‌ ಶಾಲೆ ಮೂಲೆ…
ಸರ್ಕಾರ ಕಲ್ಸಿತ್...‌ ಡಿಗ್ರಿನ ಮುಗ್ಸಿತ್...‌
ಫಸ್ಟ್‌ ಕ್ಲಾಸ್ಲಿ ಪಾಸೂ ಆತ್...‌
 
ಮುಂದೆ ನೋಡ್ತ್‌ ಉದ್ದ ಮಾರ್ಗ…
ಅದ್‌ ಮಾರ್ಗ ಇಲ್ಲದ ಮಾರ್ಗ...
ಹಿಂದೆ ಒಳದ್‌ ಗದ್ದೆ ಮಾತ್ರ…
ಅವನ ಕಣ್ಣ್‌ಲಿ ಕತ್ತಲೆ ಮಾತ್ರ…

ಕೆಲ್ಸ ಹುಡ್ಕಿ ತಿರ್ಗಿತ್...‌
ಚಪ್ಪಲೆಷ್ಟೋ ತಳ್ದತ್...
ಸರ್ಕಾರ ಕೊಟ್ಟತ್‌ ʻನಿರುದ್ಯೋಗಿʼ ಬಿರುದು…

ಹಳ್ಳಿ ಹೈದಂಗೆ ಪುಕ್ಕಟೆ ಪಾಠ…
ಪ್ಯಾಟೆ ಮಕ್ಕಳಿಗೆ ಎತ್ತರದ ಪೀಠ…

ಕನ್ನಡ ಕಲ್ತವ್ಕೆ ಬಿಸಿಲ್‌ಲಿ ಕೆಲ್ಸ…
ಇಂಗ್ಲೀಷ್‌ ಹೇಳ್ದವುಕೆ ಏ.ಸಿ ನ ಮಂಚ…

ಮಳೆಗಾಲ ಹಾಕುವೆ ಮನೆಗೊಂದ್ ನೋಟ್...‌
ಅರೆಗಾಲ ಕೇಳುವೆ ತಲೆಗೊಂದ್‌ ಓಟ್...

ಇದ್‌ವೆ ನಮ್ಮ ಬದ್‌ಕ್...‌
ಬದ್ಕಿಕಾಗಿ ಮಾತ್ರ ಬದ್ಕುವ ಬದ್ಕ್...‌

✍🏽 ಅಭಿಜಿತ್.ಕೆ.ಜೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ